 ಅಂಧಂತಮಸು ಇನ್ನಾರಿಗೆ 
ಅಂಧಂತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ ||ಪ||
ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ||ಅ.ಪ.||

ಮಾತುಮಾತಿಗೆ ಹರಿಯ ನಿಂದಿಸಿ ಸ-ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ ವೇದಾಂತ ಪ್ರಮಾಣಗಳ ಹಾರಿಸಿಸೋತು ಸಂಕಟಪಟ್ಟು
ಘಾತಕ ಒಡಲೊಳಗಿಟ್ಟು ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ ||೧||
 
ಮೂಲಕವತಾರಕ್ಕೆ ಭೇದವು - ಮುಖ್ಯಶೀಲ ಪಂಡಿತರೊಳಗೆ ವಿವಾದವು 
ಲೀಲಾ ಸಾದೃಶ್ಯವ ತೋರುತ -ಲಿಂಗಭಂಗವಿಲ್ಲದ ದೇಹ ಹಾರುತ
ಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ ||೨||

ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ ಸಂತೋಷವೆಂದರೆ ನೋಡಿ ಬಾಳ
ದೆಶೇಷಶಯನನಾದಿಕೇಶವರಾಯನ ದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ || ೩ ||ರಾಘವೇಂದ್ರ ಫೌಂಡೇಶನ್ ಅವರ ಸಂಗ್ರಹ
ನೋಡಿ
 ಕನಕದಾಸರ ಸಾಹಿತ್ಯ

ಉಲ್ಲೇಖ